ಮಹಾಬೋಧಿ ದೇವಾಲಯ ಸಂಕೀರ್ಣವು ಬೋಧಗಯಾ ದಲ್ಲಿರುವ ಬೌದ್ಧ ದೇವಾಲಯ. ಬಿಹಾರ ರಾಜ್ಯದ ಪಾಟ್ನಾ ನಗರದಿಂದ ೯೬ ಕಿ.ಮೀ. ಗಳ ದೂರದಲ್ಲಿರುವ ಇದು ಸಿದ್ದಾರ್ಥ ಗೌತಮನು ಬುದ್ಧನಾಗಿ ಪರಿವರ್ತಿತನಾದ ಪುಣ್ಯಸ್ಥಳವೆಂದೂ ಪ್ರಸಿಧ್ಧವಾಗಿದೆ. ಈ ದೇವಾಲಯದ ಪಕ್ಕದಲ್ಲೇ 'ಬುದ್ಧನ ಬೋಧಿ ವೃಕ್ಷ'ವಿದೆ. ಕರ್ನಾಟಕದ ರಾಜಧಾನಿಯಾದ ಬೆ೦ಗಳೂರಿನಲ್ಲಿ ದಕ್ಷಿಣ ಭಾರತದಲ್ಲೇ ದೊಡ್ಡದಾದ ಮತ್ತೊ೦ದು ಮಹಾಬೋಧಿ ದೇವಾಲಯವಿದೆ.